Friday, October 31, 2008

ಚುಟುಕಗಳು

ದೇವರೇ ಕೊಡು ವರ,
ಈ ವರರ ಬರದ ನಡುವೆ.
ಎಂದು ಪ್ರಾರ್ಥಿಸಿದ್ಧ
ಆ ಅರವತ್ತರ ವಿಧವೆಗೆ
ಎಪ್ಪತ್ತರ ಮುದುಕ ಸಿಕ್ಕಿದ.
ಮರುದಿನವೇ ಆಕೆ ಎರಡನೇ ಬಾರಿ
ವಿಧವೆಯಾದಳು.
---------------------------------------
ಕಂಧಕಕ್ಕಿಳಿದಾಗ
ಧೈರ್ಯವಿತ್ತು,
ಆತ್ಮ ಬಲವಿತ್ತು.
ಕಂಧಕ ಜಾಲಾಡಿ ಮೇಲೇರುವಾಗ
ಧೈರ್ಯ
ಆತ್ಮದೊಟ್ಟಿಗೆ
ದೇಹ ತ್ಯಜಿಸಿತ್ತು.
---------------------------------------
ಕೆಳಗಿಳಿವ ಬಿಳಳುಗಳೆಲ್ಲ
ನೆಲದ ಆಸರೆಗೆ ಬಯಸುವುದು
ಗಾಡ ಪ್ರೇಮದ ತವಕ.
ನೆಲ ತಾಗಿದೊಡನೆ
ಅಲ್ಲೆಲ್ಲಾ ತೂತು ಕೊರೆದು
ತನ್ನ ಅಧಿಪತ್ಯ ಸ್ಥಾಪಿಸುವುದು
ಪ್ರಕೃತಿಯ ಕುಹುಕ.
--------------------------------------
ಮನೆಯ ಸುತ್ತೆಲ್ಲ
ಹರಡಿದೆ
ನಾಚಿಕೆಯ ಮುಳ್ಳು
ಅದರ ಮಧ್ಯದಿ ಇಣುಕುತ್ತಿದೆ
ಒಣಗಿದ ಹುಲ್ಲು.
-------------------------------------